ರಾತ್ರಿ 10 ಗಂಟೆಗೆ AQI 85ಕ್ಕೆ ತಲುಪಿದರೆ, 11 ಗಂಟೆ ವೇಳೆಗೆ 93ಕ್ಕೆ ಏರಿಕೆಯಾಗಿದೆ. ಮಧ್ಯರಾತ್ರಿ 12 ಗಂಟೆಯ ನಂತರ ಈ ಪ್ರಮಾಣ 102ಕ್ಕೆ ತಲುಪಿತ್ತು. ಇದೀಗ ವಾಯು ಗುಣಮಟ್ಟ ಸೂಚ್ಯಂಕ 186ಕ್ಕೆ ಏರಿಕೆಯಾಗಿರುವುದು ಪರಿಸರದ ಮೇಲಿನ ಪರಿಣಾಮವನ್ನು ಎತ್ತಿ ತೋರಿಸಿದೆ.
ಸೋಮವಾರ ಮುಂಜಾನೆ ನಗರದ ಬಹುತೇಕ ಭಾಗಗಳಲ್ಲಿ ವಾತಾವರಣ ಮಬ್ಬಾಗಿತ್ತು. ದಟ್ಟ ಹೊಗೆಯಿಂದಾಗಿ ರಸ್ತೆಗಳಲ್ಲಿನ ಗೋಚರತೆ ಕಡಿಮೆಯಾಗಿದ್ದು, ವಾಹನ ಸವಾರರು ಸಂಚಾರದ ವೇಳೆ ತೊಂದರೆ ಎದುರಿಸುವಂತಾಯಿತು.