ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಮೈಸೂರು ಪ್ರವಾಸದ ವೇಳೆ ಅನಿರೀಕ್ಷಿತ ತಾಂತ್ರಿಕ ಸಮಸ್ಯೆಯೊಂದು ಎದುರಾಗಿದೆ. ಪ್ರಧಾನಿಯವರ ಭದ್ರತಾ ಬೆಂಗಾವಲಿಗಾಗಿ ಆಗಮಿಸಿದ್ದ ಭಾರತೀಯ ವಾಯುಪಡೆಗೆ ಸೇರಿದ ಹೆಲಿಕಾಪ್ಟರ್ವೊಂದು ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಮೈಸೂರಿನಲ್ಲೇ ಉಳಿದಿದೆ.
ಶುಕ್ರವಾರ ಮಧ್ಯಾಹ್ನ 3.20ರ ಸುಮಾರಿಗೆ ಪ್ರಧಾನಿ ಮೋದಿ ಅವರು ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ಗೆ ಆಗಮಿಸಿದ್ದರು. ಅವರ ಭದ್ರತಾ ವ್ಯವಸ್ಥೆಯ ಭಾಗವಾಗಿ ಎರಡು ಬೆಂಗಾವಲು ಹೆಲಿಕಾಪ್ಟರ್ಗಳು ಕೂಡ ಸ್ಥಳಕ್ಕೆ ಬಂದಿದ್ದವು.
ಪ್ರಧಾನಿಯವರ ಹೆಲಿಕಾಪ್ಟರ್ ಲ್ಯಾಂಡಿಂಗ್ ಆದ ಬಳಿಕ ಒಟ್ಟು ಮೂರು ಹೆಲಿಕಾಪ್ಟರ್ಗಳು ಟೇಕಾಫ್ ಆಗಬೇಕಿತ್ತು. ಈ ಪೈಕಿ ಎರಡು ಹೆಲಿಕಾಪ್ಟರ್ಗಳು ಯಾವುದೇ ಅಡಚಣೆಯಿಲ್ಲದೆ ಟೇಕಾಫ್ ಆಗಿವೆ. ಆದರೆ, ಭಾರತೀಯ ವಾಯುಪಡೆಗೆ ಸೇರಿದ ಮತ್ತೊಂದು ಬೆಂಗಾವಲು ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಅದನ್ನು ಮೈಸೂರಿನಲ್ಲೇ ನಿಲ್ಲಿಸಲಾಗಿದೆ.
ಹೆಲಿಕಾಪ್ಟರ್ನಲ್ಲಿ ಕಾಣಿಸಿಕೊಂಡಿರುವ ತಾಂತ್ರಿಕ ಸಮಸ್ಯೆಯ ಸ್ವರೂಪ ಹಾಗೂ ದುರಸ್ತಿ ಕಾರ್ಯದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ವರದಿ: ನವೀನ್ ಕುಮಾರ್
🌐 ಇನ್ನಷ್ಟು ಕ್ಷಣಕ್ಷಣದ ಸುದ್ದಿಗಳಿಗಾಗಿ ಭೇಟಿ ನೀಡಿ:
www.karunaadutimes.com
Tags:#Mysuru #NarendraModi #IndianAirForce #Helicopter #TechnicalGlitch #MysuruNews #KarnatakaNews #KarunaaduTimes