ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಾಂಬ್ ಬೆದರಿಕೆ ಪ್ರಕರಣವೊಂದು ಆತಂಕ ಸೃಷ್ಟಿಸಿದೆ. ಸಂಸತ್ ಮಾರ್ಗದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಶಾಖೆಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹಾಗೂ ಭದ್ರತಾ ಪಡೆಗಳು ತಕ್ಷಣ ಕಾರ್ಯಪ್ರವೃತ್ತವಾಗಿವೆ.
ಬೆಳಗ್ಗೆ ಸುಮಾರು 11:35ರ ವೇಳೆಗೆ ಬ್ಯಾಂಕ್ಗೆ ಬಾಂಬ್ ಬೆದರಿಕೆ ಬಂದಿರುವ ಕುರಿತು ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ಲಭಿಸಿದೆ. ಮಾಹಿತಿ ದೊರೆಯುತ್ತಿದ್ದಂತೆಯೇ ಪೊಲೀಸ್ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ತಂಡಗಳು ಸ್ಥಳಕ್ಕೆ ಧಾವಿಸಿ ಭದ್ರತಾ ಕ್ರಮಗಳನ್ನು ಕೈಗೊಂಡಿವೆ.
ಬಳಿಕ ಬ್ಯಾಂಕ್ ಕಟ್ಟಡದ ಒಳಭಾಗ, ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನುಮಾನಾಸ್ಪದ ವಸ್ತುಗಳು ಮತ್ತು ಸ್ಫೋಟಕಗಳಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಕೆಲಕಾಲ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿ ಪರಿಶೀಲನೆ ನಡೆಸಿವೆ.
ಆದರೆ, ತಪಾಸಣೆ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ಅಥವಾ ಸ್ಫೋಟಕಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಇದರಿಂದ ಸದ್ಯಕ್ಕೆ ಆತಂಕ ದೂರವಾದಂತಾಗಿದೆ.
ಇನ್ನು ಬೆದರಿಕೆ ಕರೆ ಮಾಡಿದ ವ್ಯಕ್ತಿ ಯಾರು? ಕರೆ ಹಿಂದಿನ ಉದ್ದೇಶವೇನು? ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ರಾಜಧಾನಿಯ ಪ್ರಮುಖ ಪ್ರದೇಶದಲ್ಲಿರುವ ಬ್ಯಾಂಕ್ಗೆ ಬಂದಿರುವ ಈ ಬೆದರಿಕೆ ಕರೆ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಎಚ್ಚರಿಸುವಂತೆ ಮಾಡಿದೆ.
ವರದಿ: ನವೀನ್ ಕುಮಾರ್
🌐 ಇನ್ನಷ್ಟು ಕ್ಷಣಕ್ಷಣದ ಸುದ್ದಿಗಳಿಗಾಗಿ ಭೇಟಿ ನೀಡಿ:
www.karunaadutimes.com
📲 ಕರ್ನಾಟಕದ ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್ ಹಾಗೂ ವಿಶೇಷ ವರದಿಗಳಿಗಾಗಿ ನಮ್ಮ ವೆಬ್ಸೈಟ್ ಫಾಲೋ ಮಾಡಿ.
Tags:#Delhi #NewDelhi #BombThreat #BankOfBaroda #DelhiNews #BreakingNews #BombThreatAlert #DelhiPolice #SecurityCheck #ನವದೆಹಲಿ #ಬಾಂಬ್_ಬೆದರಿಕೆ #ಬ್ಯಾಂಕ್_ಆಫ್_ಬರೋಡಾ #ದೆಹಲಿ_ಸುದ್ದಿ #ಕರ್ನಾಟಕ_ಸುದ್ದಿ #KarunaaduTimes #KarunaaduTimesNews #KannadaNews #KannadaBreakingNews