ಶಿವಮೊಗ್ಗ: ಪೆಟ್ರೋಲ್ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ರಾಜ್ಯ ಸರ್ಕಾರದ ಆರೋಪಕ್ಕೆ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ತಿರುಗೇಟು ನೀಡಿದ್ದಾರೆ. ಮಾಧ್ಯಮಗಳ ಎದುರೇ ತಮ್ಮ ಪೆಟ್ರೋಲ್ ಬಂಕ್ನಲ್ಲಿ ಪ್ರಾತ್ಯಕ್ಷಿಕೆ ನಡೆಸುವ ಮೂಲಕ ಎಥೆನಾಲ್ ಪ್ರಮಾಣವನ್ನು ಹೇಗೆ ಗುರುತಿಸಬಹುದು ಎಂಬುದನ್ನು ವಿವರಿಸಿದ್ದಾರೆ.
ಪೆಟ್ರೋಲ್ನಲ್ಲಿರುವ ಎಥೆನಾಲ್ ಪ್ರಮಾಣವನ್ನು ತಿಳಿಯಲು ಕಡ್ಡಾಯವಾಗಿ ಪ್ರಯೋಗಾಲಯಕ್ಕೇ ಹೋಗಬೇಕೆಂದಿಲ್ಲ. ಸೂಕ್ತ ಪರೀಕ್ಷಾ ವಿಧಾನದ ಮೂಲಕ ಸ್ಥಳದಲ್ಲಿಯೇ ಪ್ರಾಥಮಿಕವಾಗಿ ಪರಿಶೀಲಿಸಬಹುದು ಎಂದು ಅರುಣ್ ಹೇಳಿದ್ದಾರೆ.
ಇದನ್ನು ವಿವರಿಸಲು 100 ಮಿಲಿ ನೀರು ಹಾಗೂ 100 ಮಿಲಿ ಪೆಟ್ರೋಲ್ ಅನ್ನು ಗಾಜಿನ ಬಾಟಲಿಗೆ ಹಾಕಿ ಮಿಶ್ರಣ ಮಾಡಿ ತೋರಿಸಿದ್ದಾರೆ. ಈ ಪ್ರಾತ್ಯಕ್ಷಿಕೆಯಲ್ಲಿ ನೀರಿನೊಂದಿಗೆ ಎಥೆನಾಲ್ ಮಿಶ್ರಣಗೊಂಡು, ಪೆಟ್ರೋಲ್ ಪ್ರತ್ಯೇಕ ಪದರವಾಗಿ ಉಳಿದಿರುವುದನ್ನು ತೋರಿಸಿದ್ದಾರೆ. ತಮ್ಮ ಪ್ರದರ್ಶನದ ಪ್ರಕಾರ 20 ಮಿಲಿ ಎಥೆನಾಲ್ ನೀರಿನ ಪದರದಲ್ಲಿ ಸೇರಿದ್ದು, 80 ಮಿಲಿ ಪೆಟ್ರೋಲ್ ಉಳಿದಿದೆ ಎಂದು ವಿವರಿಸಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ಗಮನ ಬೇರೆಡೆ ಸೆಳೆಯಲು ಗೊಂದಲದ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೆಟ್ರೋಲ್ನಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣವಾಗಿರುವುದು ಅಧಿಕೃತ ಪರೀಕ್ಷೆಯಲ್ಲಿ ದೃಢಪಟ್ಟರೆ, ಸಂಬಂಧಪಟ್ಟ ಪೆಟ್ರೋಲ್ ಬಂಕ್ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ. ಆರೋಪ-ಪ್ರತ್ಯಾರೋಪಗಳ ಬದಲಿಗೆ ವೈಜ್ಞಾನಿಕವಾಗಿ ವಾಸ್ತವಾಂಶಗಳನ್ನು ಪರಿಶೀಲಿಸಬೇಕು ಎಂದು ಡಿ.ಎಸ್. ಅರುಣ್ ಆಗ್ರಹಿಸಿದ್ದಾರೆ.
ವರದಿ: ನವೀನ್ ಕುಮಾರ್
🌐 ಇನ್ನಷ್ಟು ತಾಜಾ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ:
👉 www.karunaadutimes.com
ಕರ್ನಾಟಕದ ಪ್ರತಿಯೊಂದು ಸುದ್ದಿಯೂ ನಿಮ್ಮ ಬೆರಳ ತುದಿಯಲ್ಲಿ!
Tags:#DSArun #Ethanol #PetrolNews #Shivamogga #KarnatakaPolitics #PetrolEthanol #ಎಥೆನಾಲ್ #ಪೆಟ್ರೋಲ್ #ಡಿಎಸ್ಅರುಣ್ #ಶಿವಮೊಗ್ಗ #ರಾಜ್ಯಸರ್ಕಾರ #ಪೆಟ್ರೋಲ್ಬೆಲೆ #ಕರ್ನಾಟಕಸುದ್ದಿ #ರಾಜಕೀಯಸುದ್ದಿ #KarunaaduTimes #KannadaNews #BreakingNews