ಹಾಸನ: ನಾಡಿನ ಪ್ರಸಿದ್ಧ ಶಕ್ತಿ ದೇವತೆ ಹಾಸನಾಂಬೆ ದೇವಿಯ ದರ್ಶನ ಪಡೆಯಲು ಈ ಬಾರಿ ಭಕ್ತರ ಮಹಾಪೂರವೇ ಹರಿದುಬಂದಿದ್ದು, ಭಕ್ತರ ಸಂಖ್ಯೆ ಹಾಗೂ ದೇವಾಲಯದ ಆದಾಯದಲ್ಲಿ ಭಾರೀ ಏರಿಕೆ ಕಂಡುಬಂದಿದೆ.
ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್ ನೀಡಿರುವ ಮಾಹಿತಿಯಂತೆ, ಇಂದು ಬೆಳಗ್ಗೆ 6 ಗಂಟೆಯವರೆಗೆ ಒಟ್ಟು 28.75 ಲಕ್ಷ ಭಕ್ತರು ಹಾಸನಾಂಬೆ ದೇವಿಯ ದರ್ಶನ ಪಡೆದಿದ್ದಾರೆ. ವಿಶೇಷ ದರ್ಶನದ ಟಿಕೆಟ್ಗಳು ಹಾಗೂ ಲಾಡು ಮಾರಾಟದಿಂದ ದೇವಾಲಯಕ್ಕೆ ಬರೋಬ್ಬರಿ ₹24.14 ಕೋಟಿ ಆದಾಯ ಸಂಗ್ರಹವಾಗಿದೆ.
₹1,000 ಮತ್ತು ₹300 ಮುಖಬೆಲೆಯ ವಿಶೇಷ ದರ್ಶನದ ಟಿಕೆಟ್ಗಳ ಮಾರಾಟದ ಜೊತೆಗೆ ಲಾಡು ಪ್ರಸಾದ ಮಾರಾಟವೂ ಆದಾಯಕ್ಕೆ ಪ್ರಮುಖ ಕೊಡುಗೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
🚩 ರಥೋತ್ಸವ, ಕೆಂಡೋತ್ಸವಕ್ಕೆ ಸಿದ್ಧತೆ
ಇಂದು ರಾತ್ರಿ ಸಿದ್ದೇಶ್ವರ ಸ್ವಾಮಿಯ ರಥೋತ್ಸವ ಹಾಗೂ ನಾಳೆ ಬೆಳಗ್ಗೆ ಕೆಂಡೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ದೇವಾಲಯದ ಸುತ್ತಮುತ್ತ ಕೈಗೊಂಡಿರುವ ಬ್ಯಾರಿಕೇಡ್ ವ್ಯವಸ್ಥೆಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಸಿದ್ಧತೆ ನಡೆಸಲಾಗಿದೆ.
ಇಂದು ಸಂಜೆ 6 ಗಂಟೆಯವರೆಗೆ ಸಾರ್ವಜನಿಕರಿಗೆ ಹಾಸನಾಂಬೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಮಧ್ಯಾಹ್ನ 3 ಗಂಟೆಯೊಳಗೆ ಸರತಿ ಸಾಲಿನಲ್ಲಿ ಪ್ರವೇಶ ಪಡೆದ ಭಕ್ತರಿಗೆ ಮಾತ್ರ ದರ್ಶನದ ಅವಕಾಶ ಇರಲಿದೆ ಎಂದು ಆಡಳಿತಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
🙏 ಭಕ್ತಿಯ ಮಹಾಸಾಗರಕ್ಕೆ ಸಾಕ್ಷಿಯಾದ ಹಾಸನ!
ಪ್ರತಿ ವರ್ಷವೂ ಲಕ್ಷಾಂತರ ಭಕ್ತರನ್ನು ಸೆಳೆಯುವ ಹಾಸನಾಂಬೆ ಜಾತ್ರಾ ಮಹೋತ್ಸವ ಈ ಬಾರಿ ಭಕ್ತರ ಸಂಖ್ಯೆಯಲ್ಲಿ ಹೊಸ ದಾಖಲೆ ನಿರ್ಮಿಸುವತ್ತ ಸಾಗಿದ್ದು, ದೇವಾಲಯದ ಆದಾಯವೂ ಗಮನಾರ್ಹ ಮಟ್ಟ ತಲುಪಿದೆ. ಭಕ್ತರ ನಂಬಿಕೆ, ಶ್ರದ್ಧೆ ಮತ್ತು ಸಂಭ್ರಮಕ್ಕೆ ಹಾಸನ ನಗರ ಮತ್ತೊಮ್ಮೆ ಸಾಕ್ಷಿಯಾಗಿದೆ.
ವರದಿ: ನವೀನ್ ಕುಮಾರ್
www.karunaadutimes.com
---
🌐 ಇನ್ನಷ್ಟು ಸುದ್ದಿಗಳಿಗಾಗಿ
📰 ಕರ್ನಾಟಕದ ಕ್ಷಣಕ್ಷಣದ ಸುದ್ದಿ, ಸ್ಥಳೀಯ ಬೆಳವಣಿಗೆಗಳು ಹಾಗೂ ಪ್ರಮುಖ ಅಪ್ಡೇಟ್ಗಳಿಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ.
👉 www.karunaadutimes.com
🔔 ಸುದ್ದಿಗಳನ್ನು ಓದಿ, ಹಂಚಿಕೊಳ್ಳಿ. ನಿಮ್ಮ ಊರಿನ ಸುದ್ದಿಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ.
Tags:#ಹಾಸನಾಂಬೆ #Hassanamba #ಹಾಸನ #HassanNews #ದೇವಿದರ್ಶನ #ಕರ್ನಾಟಕಸುದ್ದಿ #ರಥೋತ್ಸವ #ಕೆಂಡೋತ್ಸವ #KarunaaduTimes