ಹಾಸನ: ಉತ್ತರಾಖಂಡ್ನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಉದ್ಯಮಿ ಪ್ರತಾಪ್ಗೌಡ ಅವರನ್ನು ಕಳೆದುಕೊಂಡಿದ್ದ ಕುಟುಂಬಕ್ಕೆ ಇದೀಗ ಮತ್ತೊಂದು ಬರಸಿಡಿಲು ಬಡಿದಿದೆ. ಪ್ರತಾಪ್ಗೌಡ ಅವರ ತಂದೆ ನಿಂಗರಾಜು (84) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆ ಹಾಗೂ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಿಂಗರಾಜು ಅವರು ಚಿಕಿತ್ಸೆ ಪಡೆಯುತ್ತಿದ್ದರು. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬಾಚಿಹಳ್ಳಿ ಗ್ರಾಮದಲ್ಲಿ ನೆಲೆಸಿದ್ದ ಅವರು, ತಮ್ಮ ಜೀವನದ ಆರಂಭದ ದಿನಗಳಲ್ಲಿ ಜೋಡಿ ಕೃಷ್ಣಾಪುರದಲ್ಲಿ ಟೈಲರ್ ವೃತ್ತಿ ನಡೆಸುತ್ತಿದ್ದರು.
ನಂತರ ಅವರ ಪುತ್ರ ಪ್ರತಾಪ್ಗೌಡ ಅವರು ಉದ್ಯೋಗ ಅರಸಿ ಬೆಂಗಳೂರಿಗೆ ತೆರಳಿ, ಸ್ವಂತ ಉದ್ಯಮದ ಮೂಲಕ ಗುರುತಿಸಿಕೊಂಡಿದ್ದರು. ಆದರೆ ಇತ್ತೀಚೆಗೆ ಉತ್ತರಾಖಂಡ್ನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಪ್ರತಾಪ್ಗೌಡ ಮೃತಪಟ್ಟಿದ್ದರು. ಮಗನ ಸಾವಿನ ಸುದ್ದಿ ಕುಟುಂಬಕ್ಕೆ ಆಘಾತ ತಂದಿತ್ತು.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಿಂಗರಾಜು ಅವರಿಗೂ ಮಗನ ಸಾವಿನ ವಿಚಾರವನ್ನು ಕುಟುಂಬಸ್ಥರು ತಿಳಿಸಿದ್ದರು ಎನ್ನಲಾಗಿದೆ. ಇದೀಗ ತಂದೆಯೂ ಕೊನೆಯುಸಿರೆಳೆದಿರುವುದು ಕುಟುಂಬಸ್ಥರು ಹಾಗೂ ಸಂಬಂಧಿಕರಲ್ಲಿ ಮತ್ತಷ್ಟು ದುಃಖ ಮಡುಗಟ್ಟುವಂತೆ ಮಾಡಿದೆ.
ನಿಂಗರಾಜು ಅವರ ಅಂತ್ಯಕ್ರಿಯೆ ಇಂದು (ನವೆಂಬರ್ 6) ಬಾಚಿಹಳ್ಳಿ ಗ್ರಾಮದಲ್ಲಿ ನೆರವೇರಿತು.
ಒಂದೇ ಕುಟುಂಬದಲ್ಲಿ ಅಲ್ಪಾವಧಿಯಲ್ಲೇ ಸಂಭವಿಸಿದ ಎರಡು ಸಾವುಗಳು ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿವೆ.
ವರದಿ: ನವೀನ್ ಕುಮಾರ್
ಕರುನಾಡು ಟೈಮ್ಸ್ | www.karunaadutimes.com
🌐 ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ:
👉 www.karunaadutimes.com
Tags,:#ಉತ್ತರಾಖಂಡ್ #ಹೆಲಿಕಾಪ್ಟರ್_ದುರಂತ #ಪ್ರತಾಪ್ಗೌಡ #ನಿಂಗರಾಜು #ನಿಧನ #ಹಾಸನ_ಸುದ್ದಿ #ಸಕಲೇಶಪುರ #ಬಾಚಿಹಳ್ಳಿ #ಜೋಡಿಕೃಷ್ಣಾಪುರ #ಉದ್ಯಮಿ_ಪ್ರತಾಪ್ಗೌಡ #ತಂದೆ_ನಿಧನ #ಕರ್ನಾಟಕ_ಸುದ್ದಿ #HassanNews #SakleshpurNews #UttarakhandHelicopterTragedy #PratapGowda #BreakingNews #KannadaNews #KarunaaduTimes #wwwkarunaadutimescom