ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರು ಬಹುದಿನಗಳಿಂದ ಕಾಯುತ್ತಿದ್ದ ಮಹತ್ವದ ಬೆಳವಣಿಗೆಗೆ ದಿನಾಂಕ ನಿಗದಿಯಾಗಿದೆ. ಬೆಂಗಳೂರಿನ ಮೆಟ್ರೋ ಸಂಪರ್ಕ ಜಾಲವನ್ನು ಮತ್ತಷ್ಟು ವಿಸ್ತರಿಸಲಿರುವ ಪಿಂಕ್ ಮಾರ್ಗವನ್ನು ಇದೇ ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.
ಪ್ರಧಾನಿಯವರಿಂದ ಪಿಂಕ್ ಮಾರ್ಗಕ್ಕೆ ಚಾಲನೆ ದೊರೆಯಲಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಮೆಟ್ರೋ ಸೇವೆಯ ಮತ್ತೊಂದು ಮಹತ್ವದ ಅಧ್ಯಾಯ ಆರಂಭವಾಗಲಿದೆ. ಈ ಮಾರ್ಗದ ಕಾರ್ಯಾರಂಭದಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಮತ್ತಷ್ಟು ಬಲ ಸಿಗುವ ನಿರೀಕ್ಷೆಯಿದೆ.
ಪ್ರಮುಖವಾಗಿ ನಗರದ ಸಂಚಾರ ದಟ್ಟಣೆಯಿಂದ ಪ್ರಯಾಣಿಕರಿಗೆ ಎದುರಾಗುತ್ತಿರುವ ಸಮಸ್ಯೆಗಳಿಗೆ ಮೆಟ್ರೋ ಸೇವೆ ಪರ್ಯಾಯವಾಗಿದ್ದು, ಪಿಂಕ್ ಮಾರ್ಗದ ಆರಂಭದಿಂದ ಇನ್ನಷ್ಟು ಪ್ರದೇಶಗಳ ಜನರಿಗೆ ಅನುಕೂಲವಾಗಲಿದೆ ಎಂಬ ನಿರೀಕ್ಷೆ ಮೂಡಿದೆ.
ನವೆಂಬರ್ 13ರಂದು ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದ ಬಳಿಕ ಪಿಂಕ್ ಮಾರ್ಗದ ಸಾರ್ವಜನಿಕ ಸಂಚಾರ ಆರಂಭದ ಕುರಿತು ಪ್ರಯಾಣಿಕರಲ್ಲಿ ಕುತೂಹಲ ಹೆಚ್ಚಾಗಿದೆ.
ವರದಿ: ನವೀನ್ ಕುಮಾರ್
🌐 ಬೆಂಗಳೂರು ಸುದ್ದಿಗಳ ಕ್ಷಣಕ್ಷಣದ ಅಪ್ಡೇಟ್ಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ:
👉 https://www.karunaadutimes.com
📲 ಸುದ್ದಿಗಳನ್ನು ಓದಿ, ಹಂಚಿಕೊಳ್ಳಿ. ನಾಡಿನ ಸುದ್ದಿಗಳಿಗಾಗಿ ಸದಾ ನಮ್ಮೊಂದಿಗೆ ಇರಿ – ಕರುನಾಡು ಟೈಮ್ಸ್.