ಚಿಕ್ಕಮಗಳೂರು: ಮನೆಯಲ್ಲಿ ಸ್ನಾನಕ್ಕೆ ನೀರು ಕಾಯಿಸಲು ಬಳಸಿದ್ದ ವಿದ್ಯುತ್ ವಾಟರ್ ಹೀಟರ್ 8 ತಿಂಗಳ ಮಗು ಪ್ರಾಣವನ್ನೇ ಬಲಿ ಪಡೆದಿದೆ. ಬಕೆಟ್ನಲ್ಲಿದ್ದ ನೀರನ್ನು ಮುಟ್ಟಿದ ಬಾಲಕ ವಿದ್ಯುತ್ ಪ್ರವಹಿಸಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ.
ಮೃತ ಬಾಲಕನನ್ನು ನೀಲಾಂಶ್ (8) ಎಂದು ಗುರುತಿಸಲಾಗಿದೆ. ಈತ ಸ್ಥಳೀಯವಾಗಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.
ಭಾನುವಾರ (ನ.1) ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಬಾಲಕ ಮನೆಯಲ್ಲೇ ಇದ್ದ. ಸ್ನಾನಕ್ಕಾಗಿ ನೀರನ್ನು ಕಾಯಿಸಲು ಬಕೆಟ್ನಲ್ಲಿ ವಿದ್ಯುತ್ ವಾಟರ್ ಹೀಟರ್ ಅಳವಡಿಸಲಾಗಿತ್ತು. ಈ ವೇಳೆ ಬಾಲಕ ಬಕೆಟ್ನಲ್ಲಿದ್ದ ನೀರಿಗೆ ಕೈ ಹಾಕಿದಾಗ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಪೋಷಕರು ಮನೆಗೆ ಮರಳಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಮುದ್ದಿನ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಕುಟುಂಬಸ್ಥರ ದುಃಖ ಮನಕಲಕುವಂತಿದೆ.
ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವಿದ್ಯುತ್ ಅವಘಡದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
⚠️ ಪೋಷಕರೇ ಎಚ್ಚರ! ಮಕ್ಕಳ ಕೈಗೆಟುಕುವ ಸ್ಥಳದಲ್ಲಿ ವಿದ್ಯುತ್ ವಾಟರ್ ಹೀಟರ್ಗಳನ್ನು ಇಡಬೇಡಿ. ಹೀಟರ್ ವಿದ್ಯುತ್ ಸಂಪರ್ಕದಲ್ಲಿರುವಾಗ ನೀರನ್ನು ಮುಟ್ಟದಂತೆ ಎಚ್ಚರ ವಹಿಸಿ. ಬಳಕೆಯ ನಂತರ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಳಿಸಿ. ಒಂದು ಕ್ಷಣದ ನಿರ್ಲಕ್ಷ್ಯವೂ ಜೀವಕ್ಕೆ ಅಪಾಯವಾಗಬಹುದು.
ವರದಿ: ನವೀನ್ ಕುಮಾರ್
🌐 ಇನ್ನಷ್ಟು ಕನ್ನಡ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ:
👉 www.karunaadutimes.com
Tags:#Chikkamagaluru #Kadur #Sakharayapatna #ElectricShock #WaterHeaterAccident #ChildDeath #ಕರ್ನಾಟಕಸುದ್ದಿ #ಚಿಕ್ಕಮಗಳೂರು #ಕಡೂರು #ಸಖರಾಯಪಟ್ಟಣ #ವಿದ್ಯುತ್ ಅವಘಡ #ಕರುನಾಡುಟೈಮ್ಸ್