ರಾಮನಗರ: ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆ ಮತ್ತೊಂದು ಮಹತ್ವದ ಹಂತ ತಲುಪಿದೆ. ರೈತರ ತೀವ್ರ ವಿರೋಧದ ನಡುವೆಯೇ ಯೋಜನಾ ವ್ಯಾಪ್ತಿಯಲ್ಲಿರುವ ಉಳಿದ ಎರಡು ಕಂದಾಯ ಗ್ರಾಮಗಳ ಭೂಸ್ವಾಧೀನಕ್ಕೂ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಪ್ರಕಟಿಸಿದೆ.
ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮಗಳ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸಂಬಂಧ ಸರ್ಕಾರ ಫೈನಲ್ ನೋಟಿಫಿಕೇಷನ್ ಹೊರಡಿಸಿದೆ. ಇದರೊಂದಿಗೆ ಒಟ್ಟು 3,271 ರೈತರಿಗೆ ಸೇರಿದ 1,883 ಎಕರೆ ಭೂಮಿ ಭೂಸ್ವಾಧೀನ ಪ್ರಕ್ರಿಯೆಯ ವ್ಯಾಪ್ತಿಗೆ ಬಂದಿದೆ.
📍 ಭೈರಮಂಗಲ ಗ್ರಾಮ:
- ರೈತರ ಸಂಖ್ಯೆ: 1,866
- ಅಧಿಸೂಚಿತ ಭೂಮಿ: 1,130 ಎಕರೆ
📍 ಕಂಚುಗಾರನಹಳ್ಳಿ ಗ್ರಾಮ:
- ರೈತರ ಸಂಖ್ಯೆ: 1,405
- ಅಧಿಸೂಚಿತ ಭೂಮಿ: 753 ಎಕರೆ
ಬಿಡದಿ ಟೌನ್ಶಿಪ್ ಯೋಜನೆಗಾಗಿ ಒಟ್ಟು ಒಂಬತ್ತು ಕಂದಾಯ ಗ್ರಾಮಗಳನ್ನು ಗುರುತಿಸಲಾಗಿತ್ತು. ಈ ಪೈಕಿ ಬನ್ನಿಗಿರಿ, ಅರಳಾಳುಸಂದ್ರ, ಕೆ.ಜಿ.ಗೊಲ್ಲರಪಾಳ್ಯ, ಹೊಸೂರು, ಕೆಂಪಯ್ಯನಪಾಳ್ಯ, ಮಂಡಲಹಳ್ಳಿ ಹಾಗೂ ವಡೇರಹಳ್ಳಿ ಗ್ರಾಮಗಳಿಗೆ ಈ ಹಿಂದೆಯೇ ಅಂತಿಮ ಅಧಿಸೂಚನೆ ಪ್ರಕಟಿಸಲಾಗಿತ್ತು.
ಇದೀಗ ಉಳಿದಿದ್ದ ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮಗಳಿಗೂ ಅಂತಿಮ ಅಧಿಸೂಚನೆ ಹೊರಬಿದ್ದಿರುವುದರಿಂದ, ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗೆ ಮತ್ತಷ್ಟು ವೇಗ ದೊರೆತಂತಾಗಿದೆ.
ಆದರೆ, ಯೋಜನೆಗೆ ರೈತರ ವಿರೋಧ ಮುಂದುವರಿದಿರುವ ಹಿನ್ನೆಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ. ರೈತರ ಆಕ್ಷೇಪಗಳು ಮತ್ತು ಅವರ ಭೂಮಿಗೆ ಸಂಬಂಧಿಸಿದ ಮುಂದಿನ ಬೆಳವಣಿಗೆಗಳು ಈಗ ಗಮನ ಸೆಳೆದಿವೆ.
ವರದಿ: ನವೀನ್ ಕುಮಾರ್
🌐 ಇನ್ನಷ್ಟು ಸ್ಥಳೀಯ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ:
👉 www.karunaadutimes.com
ಕರುನಾಡು ಟೈಮ್ಸ್ – ಜನರ ಧ್ವನಿ, ಜನರಿಗಾಗಿ ಸುದ್ದಿ.
Hashtags:#BidadiTownship #Bidadi #Ramanagara #FarmersProtest #LandAcquisition #ರಾಮನಗರ #ಬಿಡದಿ #ರೈತರವಿರೋಧ #ಕರುನಾಡುಟೈಮ್ಸ್