ಬೆಂಗಳೂರು : 108 ಕೋಟಿ ಸರ್ಕಾರಿ ಭೂ ಹಗರಣ: ಎಸಿ, ತಹಸೀಲ್ದಾರ್ ಸೇರಿ 15 ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ಗೆ ಸರ್ಕಾರದ ಅನುಮತಿ – 5 ತಿಂಗಳ ಬಳಿಕ ಮಹತ್ವದ ಹೆಜ್ಜೆ!
ಬೆಂಗಳೂರು ದಕ್ಷಿಣ ಜಿಲ್ಲೆಯ ಹರೋಹಳ್ಳಿ ಗ್ರಾಮದಲ್ಲಿ ಸುಮಾರು 108 ಕೋಟಿ ರೂಪಾಯಿ ಮೌಲ್ಯದ 23 ಎಕರೆ ಸರ್ಕಾರಿ ಭೂಮಿಯನ್ನು ಖಾಸಗಿ ಹೆಸರಿಗೆ ವರ್ಗಾಯಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪ ರಾಜ್ಯದ ಆಡಳಿತ ವ್ಯವಸ್ಥೆಯ ಮೇಲೆಯೇ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಜನರ ಆಸ್ತಿಯಾದ ಸರ್ಕಾರಿ ಭೂಮಿಯನ್ನು ಕಾಪಾಡಬೇಕಾದ ಜವಾಬ್ದಾರಿ ಹೊಂದಿದ್ದ ಸರ್ಕಾರಿ ವ್ಯವಸ್ಥೆಯೊಳಗಿನ ಅಧಿಕಾರಿಗಳ ವಿರುದ್ಧವೇ ಈಗ ಕ್ರಿಮಿನಲ್ ತನಿಖೆಗೆ ದಾರಿ ತೆರೆಯಲಾಗಿದೆ.
ಎಂದಾದರೆ ನಮ್ಮ ಸಮಾಜವನು ನೆಡೆಸುವ ಮತ್ತು ಸಾಮಾನ್ಯ ನಾಗರಿಕ ಪ್ರಜೆಗಳನ್ನು ರಕ್ಷಿಸುವವರೇ ಬಕ್ಷಿಸಲು ನಿಂತಾಗ ಕಾನೂನು ಕಡೆಯ ದಾರಿ ಅಲ್ಲವೇ!
ಮೂಲ ದಾಖಲೆಗಳಲ್ಲಿ ಅಕ್ರಮ ಬದಲಾವಣೆ ಮಾಡಿ, ಕೃತಕ ದಾಖಲೆಗಳು ಹಾಗೂ ಆದೇಶಗಳ ಮೂಲಕ ಖಾಸಗಿ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ ಎಂಬ ಆರೋಪ
ಈ ಪಟ್ಟಿಯಲ್ಲಿರುವ ಅಧಿಕಾರಿಗಳ ಹೆಸರು ತಳುಕಾಗಿದೆ.
✓ ರಾಮನಗರ ಉಪ ವಿಭಾಗಾಧಿಕಾರಿ ಬೀಸೋಯ್ ಪಿ.ಕೆ.
✓ ಹರೋಹಳ್ಳಿ ತಹಸೀಲ್ದಾರ್ ಎಂ. ವಿಜಯಣ್ಣ
✓ ಹರೋಹಳ್ಳಿ ತಹಸೀಲ್ದಾರ್ ಶ್ರೀ ಹರ್ಷವರ್ಧನ್
✓ ಶಿರಸ್ತೇದಾರ್ ನವೀನ್ ಕುಮಾರ್
✓ ಹಕ್ಕು ದಾಖಲಾತಿ ಶಿರಸ್ತೇದಾರ್ ಪ್ರವೀಣ್ ಕುಮಾರ್ ಬಿ.ಎ.
✓ ಹಕ್ಕು ದಾಖಲಾತಿ ಶಿರಸ್ತೇದಾರ್ ಮೋಹನ್ ಕುಮಾರ್
✓ ಗ್ರಾಮ ಆಡಳಿತ ಅಧಿಕಾರಿ ಹಾಗೂ ಪ್ರಭಾರ ರಾಜಸ್ವ ನಿರೀಕ್ಷಕ ಅಶೋಕ್ ಕುಮಾರ್ ಲಮಾಣಿ
✓ ದ್ವಿತೀಯ ದರ್ಜೆ ಸಹಾಯಕ ಅವಿನಾಶ್ ಎನ್. ಶಿಂದೆ
✓ ಭೂ ದಾಖಲೆಗಳ ಉಪ ನಿರ್ದೇಶಕ ಹನುಮಗೌಡ ಬಿ.ಒ.
✓ ಪರ್ಯವೇಕ್ಷಕ ರಿಹಾನ್ ಶರೀಫ್
✓ ಸರ್ವೆಯರ್ ರಕ್ಷಿತ್ ಪಿ.
✓ ತಾಂತ್ರಿಕ ಅಪೇಕ್ಷಕ ಹಾಗೂ ಪ್ರಭಾರ ಸಹಾಯಕ ನಿರ್ದೇಶಕ ನಂದೀಶ್
✓ ಚೆಕಿಂಗ್ ಭೂಮಾಪಕ ನಂದೀಶ್ ಕುಮಾರ್ ಜಿ.ಎಸ್.
✓ ಪರ್ಯವೇಕ್ಷಕ ಪ್ರಭಾಕರ್ ಎಸ್.ಡಿ.
✓ ಫೀಲ್ಡ್ ಸರ್ವೆಯರ್ ರಘುನಾಥ್ ಕೆ.ಬಿ.
ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗುವವರೆಗೆ ಮೇಲ್ಕಂಡ ಎಲ್ಲರೂ ಕಾನೂನಿನ ದೃಷ್ಟಿಯಲ್ಲಿ ನಿರಪರಾಧಿಗಳಾಗಿರುತ್ತಾರೆ.
ಈಗ ಜನರ ಮುಂದೆ ನಿಂತಿರುವ ಪ್ರಶ್ನೆ ಒಂದೇ...
108 ಕೋಟಿ ಮೌಲ್ಯದ ಸರ್ಕಾರಿ ಭೂಮಿಯನ್ನು ಕಬಳಿಸಲು ರೂಪುಗೊಂಡಿದ್ದೆನ್ನಲಾದ ಈ ಅಕ್ರಮದ ಹಿಂದಿರುವ ಸಂಪೂರ್ಣ ಜಾಲ ಬಯಲಾಗುತ್ತದೆಯೇ? ತಪ್ಪು ಸಾಬೀತಾದವರಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯಾಗುತ್ತದೆಯೇ?
ಈ ಪ್ರಶ್ನೆಗಳಿಗೆ ಮುಂದಿನ ತನಿಖೆ ಮತ್ತು ನ್ಯಾಯಾಲಯದ ತೀರ್ಪೇ ಅಂತಿಮ ಉತ್ತರ ನೀಡಲಿದೆ.
ಒಂದಂತೂ ನಿಜವಲ್ಲವೇ ಓದುಗರೇ ಉಪ್ಪು ತಿಂದವರು ನವಾಗಲಿ ನಿವಾಗಲಿ ನೀರುಕುಡಿಯಬೇಕಲ್ಲವೇ?